ಬಾಲ್ಕನಿ,ಟೆರೇಸ್‌ ಮೇಲೊಂದು ಹಸಿರು ಸಾಮ್ರಾಜ್ಯ ಕಟ್ಟಿ

image: http://www.udayavani.com/sites/default/files/styles/article_new_image/public/images/articles/2016/10/1/59.jpg?itok=FmJrzGnq

 

ಈಗೀಗ ಎಲ್ಲಾದರೂ ಸೈ ಹಸಿರು ನೋಡಿದರೆ ಸಾಕು ಖುಷಿಯಾಗುತ್ತದೆ. ಹಸಿರ ಮಧ್ಯೆ ಸ್ವಲ್ಪ ಹೊತ್ತು ಕೂತರೆ ಸಾಕು ಅದೇನೋ ನೆಮ್ಮದಿ. ಹಾಗಾಗಿಯೇ ನಗರದ ಬಹುತೇಕರು ಹಸಿರು ನೋಡುವುದಕ್ಕೆಂದೇ ವೀಕೆಂಡ್‌ನ‌ಲ್ಲಿ ಟೂರ್‌ ಹೋಗುತ್ತಾರೆ. ಹಸಿರ ಜೊತೆ ಒಂದೆರಡು ದಿನ ಕಳೆದು ಬರುತ್ತಾರೆ. ಅವರಲ್ಲೇ ಕೆಲವು ಮಂದಿ ನಗರದಲ್ಲೇ ಹಸಿರ ಮಧ್ಯೆ ಇರುವ ಯೋಜನೆ ಮಾಡಿಕೊಂಡಿದ್ದಾರೆ. ಅದು ಹೇಗೆಂದರೆ ಗಾರ್ಡನ್‌ ಟೆರೇಸ್‌. 

ಟೆರೇಸಲ್ಲೋ ಬಾಲ್ಕನಿಯಲ್ಲೋ ಜಾಗ ಇದ್ದರೆ ಅಂಗಳದಲ್ಲೋ ಗಾರ್ಡನ್‌ ಸಿದ್ಧಗೊಳಿಸಿ ಅಲ್ಲಿ ಸಾವಯವ ಕೃಷಿ ಮಾಡೋದು. ಪುರ್ಸೊತ್ತಿದ್ದಾಗಲೆಲ್ಲಾ ಅಲ್ಲಿ ಹೋಗಿ ಕೂತು ತರಕಾರಿಗಳ ಜೊತೆ ಮಾತಾಡಿ ಖುಷಿ ಪಡುವುದು. ನಿಮಗೂ ಈ ಥರ ಗಾರ್ಡನ್‌ ಸಿದ್ಧಗೊಳಿಸಿ ಸಾವಯವ ತರಕಾರಿ ಬೆಳೆಸಬೇಕು ಅಂದ್ರೆ ಗಾರ್ಡನ್‌ ರೆಡಿ ಮಾಡಿಕೊಡುವ ಒಂದು ಸಂಸ್ಥೆ ಇದೆ. ಅದರ ಹೆಸರು ಮೈ ಡ್ರೀಮ್‌ ಗಾರ್ಡನ್‌.

ಏನಿದು ಮೈ ಡ್ರೀಮ್‌ ಗಾರ್ಡನ್‌?
ಮೈ ಡ್ರೀಮ್‌ ಗಾರ್ಡನ್‌ ನಿಮಗೆ ಗಾರ್ಡನ್‌ ಸಿದ್ಧಪಡಿಸಿ ಕೊಡುವ ಮತ್ತು ಸಾವಯವ ತರಕಾರಿಗಳನ್ನು ಬೆಳೆಸುವ ಬಗೆಯನ್ನು ಹೇಳಿಕೊಡುವ ತಂಡದ ಹೆಸರು. ಈ ತಂಡದ ನಾಯಕ ಅಶೋಕ್‌ ಕುಮಾರ್‌. ನಿಮಗೂ ಗಾರ್ಡನ್‌ ಬೇಕು ಅಂತಾದರೆ ಇವರಿಗೆ ಹೇಳಿದರೆ ಸಾಕು ಇವರೇ ಬಂದು ನಿಮಗೆ ಟೆರೇಸಲ್ಲೋ ಬಾಲ್ಕನಿಯಲ್ಲೋ ಗಾರ್ಡನ್‌ ಸಿದ್ಧಮಾಡಿ ಕೊಡುತ್ತಾರೆ. ಆಮೇಲೆ ನೀವು ನಿಮಗೆ ಬೇಕಾದ ತರಕಾರಿಗಳನ್ನು ಬೆಳೆದು ಖುಷಿ ಪಡಬಹುದು. ನೀವೇ ನಿಮಗೆ ಬೇಕಾದ ಹಾಗೆ ಗಾರ್ಡನ್‌ ರೆಡಿ ಮಾಡಿಕೊಳ್ಳುತ್ತೀರಿ ಅಂದ್ರೆ ಅದಕ್ಕೆ ಬೇಕಾದ ಪರಿಕರಗಳನ್ನೂ ಇವರು ಒದಗಿಸಿಕೊಡುತ್ತಾರೆ. 

ಯಾವ್ಯಾವ ತರಕಾರಿಗಳನ್ನು ಬೆಳೆಸಬಹುದು, ಹೇಗೆ ಬೆಳೆಸಬೇಕು, ಹೇಗೆ ನೀರೂಣಿಸಬೇಕು ಎಂಬೆಲ್ಲಾ ಮಾಹಿತಿಗಳನ್ನು ತಿಳಿಸಲು ಅಶೋಕ್‌ ಕುಮಾರ್‌ ವರ್ಕ್‌ಶಾಪ್‌ ಮಾಡುತ್ತಾರೆ. ಈವರೆಗೆ ಅವರು ಸುಮಾರು 700 ಗಾರ್ಡನ್‌ಗಳನ್ನು ಸಿದ್ಧಪಡಿಸಿಕೊಟ್ಟಿದ್ದಾರಂತೆ. ಅವರಲ್ಲಿ ಬಹುತೇಕರು ಈಗ ಅವರಿಗೆ ಬೇಕಾದ ತರಕಾರಿಗಳನ್ನು ಅವರೇ ಬೆಳೆಸಿಕೊಳ್ಳುತ್ತಿದ್ದಾರೆ. ಹೀಗೆ ಮಾಡುವುದರ ಮೂಲಕ ಖುಷಿಯೂ ಸಿಗುತ್ತದೆ ಮತ್ತು ಆರೋಗ್ಯಯುತ ತರಕಾರಿಗಳೂ ಸಿಗುತ್ತದೆ ಎನ್ನುತ್ತಾರೆ ಅಶೋಕ್‌.

image: http://www.udayavani.com/sites/default/files/images/articles/60_0.jpg

 

ಇದರ ಜೊತೆ ಟೆರೇಸ್‌ ಮೇಲೆ ಗ್ರೀನ್‌ಹೌಸ್‌ ಕೂಡ ತಯಾರಿಸಿಕೊಡುತ್ತಾರೆ. ಇದರ ಉದ್ದೇಶ ಮನೆ ಮೇಲೆ ಹಸಿರು ವಾತಾವಾರಣ ನಿರ್ಮಿಸುವುದು. ಹಸಿರ ಜೊತೆ ಸಹವಾಸ ಬೇಕು ಅನ್ನುವವರು ಈ ಗ್ರೀನ್‌ಹೌಸ್‌ ನಿರ್ಮಿಸಬಹುದು. ನಗರದಲ್ಲೇ ಇದ್ದರೂ ತೋಟದಲ್ಲಿ ಇದ್ದಂಥಾ ಅನುಭವ ಈ ಗ್ರೀನ್‌ಹೌಸ್‌ನಲ್ಲಿ ಸಿಗುತ್ತದೆ ಎನ್ನುತ್ತಾರೆ ಅಶೋಕ್‌. ನಿಮಗೆ ಗಾರ್ಡನ್‌ ತಯಾರಿಸಿ ಕೊಡಬೇಕೆಂದರೂ ಸೈ ಅಥವಾ ಮಾಹಿತಿ ಬೇಕೆಂದರೂ ನೀಡುತ್ತಾರೆ. ಆಸಕ್ತಿ ಇದ್ದರೆ ಮೈ ಡ್ರೀಮ್‌ ಗಾರ್ಡನ್‌ಗೆ ಎಂಟ್ರಿ ಕೊಡಿ.

ಎಲ್ಲಿ- ನಂ.4, ಎಲ್‌ಪಿ ಕಾಂಪ್ಲೆಕ್ಸ್‌, 4ನೇ ಅಡ್ಡರಸ್ತೆ, 2ಸಿ 3ನೇ ಮುಖ್ಯರಸ್ತೆ, ಓಎಂಬಿಆರ್‌ ಲೇಔಟ್‌, ಬಾಣಸವಾಡಿ
ದೂ- 7676021777
ವೆಬ್‌ಸೈಟ್‌-  www.mydreamgarden.in
ಫೇಸ್‌ಬುಕ್‌- https://www.facebook.com/itsmydreamgarden/